Tuesday, 25 October 2011

ದೇವರ ಆಟ

ಪ್ರಿಯ ಸ್ನೇಹಿತರೇ

ಈ ಜಗತ್ತಿನ ಬೆಲೆಯೇ ಕಟ್ಟಲು ಆಗದೆ ಇರುವುದು ಅಂದರೆ ಅದು ಪ್ರೀತಿ ಮಾತ್ರ ಅನಿಸುತ್ತೆ ಯಾಕೆಂದ್ರೆ ಪ್ರೀತಿ ಪ್ರತಿಯೊಬ್ಬ ಭಾವಜೀವಿಗಳ ಉಸಿರು...

ಪ್ರೀತಿಗೆ ಜಗತ್ತನ್ನ ಗೆಲ್ಲೋ ಶಕ್ತಿಯಿದೆ ಅಂತಾರೆ ಆದರೆ ಈ ಜಗತ್ತಲ್ಲಿ ಪ್ರತಿಯೊಬ್ಬರ ಬಾಳಲ್ಲೂ ಪ್ರೀತಿ ವಿಷಯದಲ್ಲಿ ಸೋಲನ್ನ ಕಂಡವರೆ ಜಾಸ್ತಿ ಎನ್ನಬಹುದು..

ಪ್ರೀತಿ ಮತ್ತು ಸಾವು ಇವೆರೆಡು ಹೇಳದೆ ಕೇಳದೇ ಕೊಡುವ ಭಗವಂತನ ಕಾಣಿಕೆ
ಹೌದು, ಗೆಳೆಯರೇ ನನ್ನ ಈಗಿನ ಪ್ರಯತ್ನ ಪ್ರೀತಿ ಮತ್ತು ಸಾವು ....

ಸಾವಲ್ಲಿ ಬೇಕಾದರೆ ಯಾರಾದರು ತಲೆ ತೂರಿಸಬವುದು ಆದರೆ ಪ್ರೀತಿ ವಿಷಯದಲ್ಲಿ ಆಗಲ್ಲನಾವಾಗಲಿ ನೀವಾಗಲಿ
ಗೆಳೆಯರಾಗಲಿ ಬಳಗವಾಗಲಿ
ಗುರುಗಳಾಗಲಿ ಋಷಿಗಳಾಗಲಿ
ದೇವರಾಗಲಿ ದಿಂಡರಾಗಲಿ
ತಲೆ ತೂರಿಸೋ ಹಾಗಿಲ್ಲ


ಈ ಸಾಲಿನ ಅರ್ಥ ಹುಡುಕುತ್ತ ಹೊರಟ ನನಗೆ ಸಿಕ್ಕಿದು ಒಂದೇ ಉತ್ತರ ಅದೇನಂತ ಈ ಕತೆ ಓದಿದ ನಂತರ ನಿಮಗೆ ತಿಳಿಯುತ್ತದೆ....

ಕೇವಲ ಒಂದು ತಿಂಗಳು ಹಿಂದೆ ನಾನು ಕಂಡ ಒಂದು ಸತ್ಯ ಕತೆ ಆಗು ಸ್ವಲ್ಪ ಕಾಲ್ಪನಿಕ ಹಾಗಂತ ಇದರಲ್ಲಿ ಯಾವುದು ಸತ್ಯ, ಯಾವುದು ಕಲ್ಪನೆ ಅಂತ ಕೇಳೋಕ್ ಹೋಗ್ಬೇಡಿ ಅದು ಆರೋಗ್ಯಕ್ಕೆ ಒಳ್ಳೇದಲ್ಲ ...

ನಮ್ಮ ಬೆಂಗಳೂರಿನಲ್ಲಿ ಪ್ರೇಮಿಗಳಿಗೆ ಏನು ಕಡಿಮೆ ಇಲ್ಲ ಪ್ರೇಮಿಗಳು ತುಂಬ ಜನ ಸಿಗ್ತಾರೆ ಆದರೆ ಪ್ರೀತಿ ನ ಉಳಿಸಿಕೊಳ್ಳೋರು ೧೦೦ ರಲ್ಲಿ ೫ ಜನ ಮಾತ್ರ ಆ ೫ ಜನರಲಿ ನೆಮ್ಮದಿಯಾಗಿ  ಬಾಳೋವ್ರು ಒಬ್ರು  ಮಾತ್ರ  ಸಿಗ್ತಾರೆ  ಹಾಗೆ  ಪ್ರೀತಿ ಗಾಗಿ  ಸಾವಿಗೆ ಶರಣು ಅಗೊವ್ರು ಜಾಸ್ತಿನೇ ಇದ್ದಾರೆ.  "ನಾನು ಹೇಗೆ ಇದ್ದರು ನಾನು ಪ್ರೀತಿಸಿದವರು ಚನ್ನಾಗಿ ಬಾಳಲಿ" ಅಂತ ಹೇಳುವವರು ಕಡಿಮೆನೆ ಹಾಗೆ ಈ ನನ್ನ ಕಥಾ ನಾಯಕನು ಕೂಡ ಒಬ್ಬ....

ಸುಳ್ಳು ಮೋಸ ಮಾಡಿ ಪ್ರೀತಿಸಿ ಆದರೆ ಪ್ರೀತಿಸಿ ಸುಳ್ಳು ಹೇಳಿ ದೂರ ಆಗೋದು ಸರಿ ಅಲ್ಲ ಆದರೆ ನನ್ನ ಕಥಾ ನಾಯಕ ಮಾಡಿದ್ದೂ ಸರಿನೋ ತಪ್ಪೋ ನನಗೆ ಈಗಲು ಗೊತ್ತಾಗ್ತಾ ಇಲ್ಲ ಇದಕ್ಕೆ ನೀವೇ ಉತ್ತರ ಕೊಡಬೇಕು ಗೆಳೆಯರೇ.....


ಪ್ರೀತಿಯ ಭಾವನೆಗಳೇ ನನ್ನ ಲೋಕ ನನಗೆ ಬೇರೆ ಯಾವ ಲೋಕವೇ ಇಲ್ಲ ಅಂತ ಜೀವನ ಸಾಗಿಸುತಿದ್ದ ಕಥಾ ನಾಯಕನ ಹೆಸರು ವಿನೋದ್ ( ವಿನು ) ಅವನ ಪೆಟ್ ನೇಮ್ . ಅಮ್ಮ ನ ಮುದ್ದು ಮಗನಾಗಿ ಬೆಳೆದ ವಿನು ಸ್ವಲ್ಪ ಸೋಂಬೇರಿ ಈಗ ಒಂದು ಚಿಕ್ಕ company ಯಲ್ಲಿ ಕಾರ್ಯನಿರ್ವಹಿಸುತಿದ್ದಾನೆ.

ಚಿಕ್ಕವನಿಂದ ಬರೀ ಕನಸುಗಳನ್ನೇ ಕಾಣುತಿದ್ದ ಇವನು ಆ ಕನಸನ್ನ ನನಸು ಮಾಡಲು ಪ್ರಯತ್ನವೇ ಪಡುತಿರಲಿಲ್ಲ ಆದರೆ ಪ್ರೀತಿ ವಿಷ್ಯ ದಲ್ಲಿ ಮಾತ್ರ ತುಂಬ ಕನಸುಗಳನ್ನ ಕಂಡ ವಿನುವಿಗೆ ಅವನು ಕನಸು ಕಂಡ ಹಾಗೆ ಅವನಿಗೆ ನಿಜವಾದ ಪ್ರೀತಿ ಸಿಕ್ಕಿತು.        ಹ ಪ್ರೀತಿಯ ಹೆಸರು ' ಸೌಮ್ಯ '

ಸೌಮ್ಯ ? ನನ್ನ ಕಥಾ ನಾಯಕಿ
ನಿಜ ಹೇಳಬೇಕು ಎಂದರೆ ಸೌಮ್ಯ ಬೆಂಕಿಯಲ್ಲಿ ಅರಳಿದ ಹೂ. ಸೌಮ್ಯ ಗೆ ಅಪ್ಪ ನ ಪ್ರೀತಿ ಸಿಗದೇ ಚಿಕ್ಕವಳಿಂದ ಅಜ್ಜಿಯಾ ನೆರಳಲಿನಲಿ ಬೆಳೆದ ಹುಡುಗಿ...

ಸೌಮ್ಯ ಳಿಗೆ ತಿಳಿದಿದ್ದು ಒಂದೇ ಅದು ಸ್ನೇಹ . ಎಲ್ಲರ ಜೊತೆಯಲ್ಲೂ ಸ್ನೇಹ ವಿಶ್ವಾಸ ದಿಂದ ಇದ್ದ ಸೌಮ್ಯಳಿಗೆ ಮುಂದೆ ಜೀವನದಲ್ಲಿ ಅದೇ ಮುಳ್ಳಾಗಿ ನಿಲ್ಲುತೆ


ಸೌಮ್ಯ ಮತ್ತು ವಿನು ಕಳೆದ ಎರೆಡು ವರ್ಷಗಳಿಂದ ಮನಸಾರೆ ಪ್ರೀತಿಸ್ತಾ ಇರ್ತಾರೆ. ವಿನು ನಾನು ಕಂಡಂತೆ ನನಗೆ ನನ್ನ ಪ್ರೀತಿ ಮಾಡುವ ಒಂದು ಜೀವ ಇದೆ ಎನ್ನುತ್ತಾ ಚಿಕ್ಕವಳಿಂದ ನೋವಿನಲ್ಲೇ ಬೆಳೆದು ಬಂದ ಸೌಮ್ಯ ಳಿಗೆ ವಿನು ಪ್ರತಿ ದಿನ ನಗು ವೆಂಬ ಸಂತೋಷ ಕೊಡುತಿದ್ದ.....

ಇತ್ತ ಸೌಮ್ಯ ನನ್ನ ಕಣ್ಣಿರು ಒರೆಸಲು ಅ ದೇವರೇ ಕಳಿಸಿರಬೇಕು ಎನ್ನುತ ಮನಸಿನಲೇ ವಿನು ಗೆ ಗುಡಿ ಕಟ್ಟಿ ಪ್ರತಿ ದಿನ ಪುಜಿಸುತ್ತ ತನ್ನ ಪ್ರೀತಿ ಯನ್ನ ಎದೆ ಗುಡಿನಲ್ಲಿ ಬಚ್ಚಿಟ್ಟಿದ್ದಳು. 

ನನಗೆ ನೀನು ನಿನಗೆ ನಾನು ಮನಸಿಗೆ ನೋವಾದಾಗ ನಿನ್ನ ಮಡಿಲಲ್ಲಿ ಮಗುವಿನಂತೆ ಮಲ್ಕೋ ಬೇಕು ಅನ್ನುವ ಹುಡುಗ
ಸ್ನೇಹಿತರನ್ನು ದೂರ ಮಡಿ ನನಗೆ ನಿನ್ನ ಹೊರತು ಬೇರೆ ಯಾರು ಬೇಕಿಲ್ಲ ನೀನೆ ನನ್ನ ಭಾಳ ದೈವ ಎನ್ನುವ ಮುಗ್ದ ಮನಸಿನ ಹುಡುಗಿ ಇವರಿಬ್ಬರ ಪ್ರೇಮ ತರ್ಕಕ್ಕೆ ನಿಲುಕದ್ದು ಎನ್ನಬಹುದು.

ಒಂದು ಕ್ಷಣ ಸೌಮ್ಯ ಳ ಕಣ್ಣಿಂದ ವಿನು ಮರೆಯಾಗುವುದನ್ನು ಕನಸಿನಲ್ಲಿ ಕಂಡರೂ ಬೆಚ್ಚಿ ಬಿಳುತಿದ್ದ ಹುಡುಗಿ ಸೌಮ್ಯ
ತನ್ನ ಪ್ರೀತಿಗೆ ಎಲ್ಲಿ ನನ್ನ ಸ್ನೇಹಿತರು ಮುಳ್ಳಾಗುತ್ತಾರೋ ಎಂದು ತನ್ನೆಲ್ಲ ಸ್ನೇಹ ವನ್ನು ದೂರ ಮಾಡಿ ಅವರೆಲ್ಲರ ದೃಷ್ಟಿಯಲಿ ಕೆಟ್ಟವಳಾಗಿ ವಿನುವಿನ ಪ್ರೀತಿ ಗಾಗಿ ಆ ದೇವರ ಬಳಿ ದಿನ ಕೇಳುತಿದ್ದ ಹುಡುಗಿ ಸೌಮ್ಯ

ಜೀವನದಲ್ಲಿ ಗುರಿಯೇ ಇಲ್ಲದೆ ಬೆಳೆದೆ ವಿನೋದ್ ಬಾಳಿಗೆ ದಾರಿ ದೀಪ ವಾಗಿ ಆತ್ಮಸ್ಠ್ಯರ್ಯ ತುಂಬಿ ಪ್ರೇಮಿ ಆಗಿ ವಿನೋದ್ ಬಾಳಿನಲ್ಲಿ ಗುರಿ ಎಂಬುವ ದಾರಿಯನ್ನು ತೋರಿದ ಹುಡುಗಿ ಸೌಮ್ಯ. 

ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಸೌಮ್ಯ ವಿನುವಿನ ಪಾಲಿಗೆ ತಾಯಿಯಾಗಿ, ಮಡದಿಯಾಗಿ, ಸ್ನೇಹಿತೆಯಾಗಿ ಭಾವನೆಗಳಿಗೆ ಬೆಲೆ ಕೊಟ್ಟು ವಿನೋದ್ ಬಾಳಿಗೆ ಬೆಳಕಾಗಿ ನಿಂತವಳು ನಮ್ಮ ಈ ಮುಗ್ದ ಮನಸಿನ ಹುಡುಗಿ.

ವಿದಿ ಎಲ್ಲರ ಬಾಳಿನಲ್ಲೂ ಆಟ ಅಡಲೇ ಬೇಕು ಎಂಬುದು ಭಗವಂತ ನ ಇಚ್ಛೆ ಅನಿಸುತ್ತೆ.... ದಿನಗಳು ಕಳೆದಂತೆ ಇವರ ಪ್ರೇಮದಲ್ಲೂ ಕೂಡ ಆ ಕ್ರೂರ ವಿಧಿ ಆಟ ಆಡಿಯೇ ಬಿಟ್ಟಿತು.

ಕೆಲವು ದಿನಗಳ ನಂತರ ವಿನು ಕಚೇರಿಯಲ್ಲೇ ಕೆಲಸ ಮಾಡುತಿದ್ದ ಲಕ್ಷ್ಮೀ ಎಂಬುವ ಹುಡುಗಿ ಜೊತೆ ಸಲಿಗೆಯಿಂದ ಇದ್ದ ವಿನೋದ್ ಬೇರೆಯರ ಕಣ್ಣಿಗೆ ಅದು ಪ್ರೀತಿ ರೂಪ ದಲ್ಲಿ ಕಾಣಿಸುತ್ತದೆ. ಇದನ್ನು ಗಮನಿಸಿದ ಸೌಮ್ಯ ನನ್ನ ದೇವರು ನನಗೆ ಮೋಸ ಮಾಡುವುದಿಲ್ಲ ಎಂಬುವ ನಂಬಿಕೆಯೇ ಮೇಲೆ ಇರುತ್ತಾಲೆ ಹೀಗೆ ದಿನಗಳು ಕಳೆದಂತೆ ವಿನು ಮತ್ತು ಲಕ್ಷ್ಮೀಯ ಸ್ನೇಹ ಮುಂದುವರೆಯುತಿರುದನ್ನು ನೋಡಿ ಸೌಮ್ಯ ಮನದಲ್ಲೂ ಗೊಂದಲ ಶುರುವಾಗುತ್ತದೆ. ಒಂದು ದಿನ ಸೌಮ್ಯ
ವಿನೋದ್ ಬಳಿ ಬಂದು ವಿನು ಪುಟ್ಟ ದಯವಿಟ್ಟು ನಮ್ಮಿಬ್ಬರ ನಡುವೆ ಯಾರೂ ಬರಲು ದಾರಿ ಮಾಡಿ ಕೊಡಬೇಡ ನನಗೆ ಭಯ ಆಗ್ತಿದೆ ಕಣೋ ವಿನು ನಿಜವಾಗಿಯೂ ನಾ ಇಷ್ಟು ದಿನ ನಮ್ಮಿಬ್ಬರ ಬಗ್ಗೆ ಕಂಡಿದ್ದ ಕನಸು ನಿಜವಾಗದಿದ್ದರೆ ಕಂಡಿತ ನಾನು ಉಸಿರು ಆಡಲಾರೆ ಎಂದು ವಿನುವಿನ ಕಾಲಿಗೆ ಬಿದ್ದು ಕೇಳುತ್ತಾಳೆ

ಮುಗ್ದ ಮನಸಿನ ಭಾವನೆ ಯನ್ನು ಅರಿಯದ ವಿನೋದ್ ತನ್ನ ಕಟುಕ ಮನಸಿಂದ ನೀನು ಯಾವ ರೀತಿ ನಿನ್ನ ಗೆಳೆಯರ ಜೊತೆ ಇದ್ದೀಯೋ ನಾನು ಹಾಗೆ ಇದ್ದೀನಿ... ಇದರಲ್ಲಿ ತಪ್ಪೇನಿದೆ ಎಂದು ಕ್ರೂರವಾಗಿ ನುಡಿಯುತ್ತಾನೆ.

ದೇವರು ಎಂದು ಎದೆಯಲ್ಲಿ ಗುಡಿ ಕಟ್ಟಿ ಪೂಜಿಸುತಿದ್ದ ವಿನೋದ್ ಮಾತನ್ನು ಕೇಳಿ ಸೌಮ್ಯ ಒಂದು ಕ್ಷಣ ಮಾತನಾಡದೆ ಮೌನವಾಗಿ ಕುಸಿದುಬಿಡುತ್ತಾಳೆ.
ಸೌಮ್ಯ ಳ ಕಣ್ಣಿಂದ ಕಣ್ಣೀರು ತಾನಾಗಿಯೇ ಕೆನ್ನೆಯನ್ನು ಸ್ಪರ್ಶಿಸುತ್ತದೆ

ಮನಸೇ ಇಲ್ಲವನಂತೆ ಇದ್ದ ವಿನೋದ್ ಸೌಮ್ಯ ಳ ಕನ್ನೀರಿಗೆ ಬೆಲೆ ಕೊಡದೆ "ನಿನಗೆ ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ನಿನ್ನ ದಾರಿ ನೀನು ನೋಡಿಕೋ ನಾನು ನನ್ನ ಸ್ನೇಹ ಬಿಡಲಾಗುದಿಲ್ಲ"  ಎಂದು ಕಟುವಾಗಿ ಹೇಳುತ್ತಾನೆ.

ವಿನೋದ್ ಮಾತನ್ನು ಕೇಳಿದ ಸೌಮ್ಯ ಳಿಗೆ ಎದೆಗೆ ಸಿಡಿಲು ಅಪ್ಪಳಿಸಿದಂತೆ ಆಗಿ ಸೌಮ್ಯ ಕಣ್ಣಿರು ತಾನಾಗಿಯೇ ನಿಲ್ಲುತ್ತದೆ. ವಿನೋದ್ ಮಾತು ಕೇಳಿ
ಸೌಮ್ಯ ಮುಕ ಹಕ್ಕಿ ಯಾಗಿ ನಿಂತು "ವಿನು ಯಾರೇ ನನ್ನ ಬಗ್ಗೆ ಏನೇ ಹೇಳಿದರೂ ನನಗೆ ಏನು ಆಗುತಿರಲಿಲ ಆದರೆ ನನ್ನ ದೇವರು ನೀನು... ನೀನೆ
ನನ್ನ ನು ದೂರ ಮಾಡಿದ ಮೇಲೆ ನಾನು ಬದುಕಿದ್ದರು ವ್ಯೆರ್ಥ" ಎಂದು ಹೇಳಿ ಸೌಮ್ಯ ಕಣ್ಣಿನಲ್ಲಿ ಕಂಬನಿ ತುಂಬಿ ಕೊಂಡು ಪಾರ್ಕ್ ನಿಂದ ಹೊರಡುತ್ತಾಳೆ.
ಎಂದೂ ಕೂಡ ಸೌಮ್ಯಳನ್ನು ಒಂಟಿ ಯಾಗಿ ಬಿಡದ ವಿನೋದ್ ಅಂದು ಸೌಮ್ಯಳನ್ನು ಒಂಟಿ ಮಾಡಿ ಅಸಯಕನಂತೆ ನಿಲ್ಲುತ್ತಾನೆ.

ಸೌಮ್ಯಳಿಗೆ ಅಂದಿನಿಂದ ಪ್ರತಿ ಕ್ಷಣಗಳು ನರಕದಂತಾಗಿ ವಿನೋದ್ ನೆನಪು ಕಾಡುತ್ತಿರುತ್ತದೆ ವಿನು ಮಾತು ಗಳು ಸೌಮ್ಯ ಳ ಮನಸನ್ನು ಬಾಣದಂತೆ ಚುಚ್ಚಿ ಮನಸನ್ನ ಕೊಲ್ಲುತಿರುತ್ತದೆ. ಸೌಮ್ಯ ಉಸಿರು ಅಡುವ ಗೊಂಬೆಯಂತೆ ಅಸಾಯಕಳಂತೆ ಬದುಕುತ್ತಿರುತ್ತಾಳೆ

ಎಲ್ಲ ಎನಿಸಿ ನೋಡಿದರೆ......ಸೌಮ್ಯ ಮತ್ತು ವಿನೋದ್ ಬಾಳಿನಲ್ಲಿ ಬಂದ ಆ ಕರಾಳ ದಿನ ಯಾರ ಜೀವನದಳ್ಳು ಬರಬಾರದು ಅನಿಸುತ್ತೆ.

ಹೌದು ಗೆಳೆಯರೇ ಅಂದು ಶುಭ ಶುಕ್ರವಾರ ವಿನೋದ್ ಗೆ ಸೌಮ್ಯ ಸಿಕ್ಕಿದ ದಿನ ಆದರೆ ಅಂದು ಇಬ್ಬರಿಗೂ black Friday
ಅಂದು ಸೌಮ್ಯ ವಿನೋದ್ ಮೊದಲ ಬಾರಿಗೆ ಬೇಟಿ ಮಾಡಿದ ಜಾಗದಲ್ಲಿ ಕುಳಿತು
ಸೌಮ್ಯ "ವಿನೋದ್ ನಾನು ನಿನ್ನ ಮನಸಾರೆ ಪ್ರೀತಿಸಿದೆ ...   
ನಾನು ಎಂದಿಗೂ ನಿನ್ನ ಸುಖವನ್ನೇ ಬಯಸುವಳು ನೀನು ಎಲ್ಲೇ ಇದ್ದರು ಚೆನ್ನಾಗಿ ಬಾಳು.. 
ನೀನು ನನ್ನ ಬಿಟ್ಟು ನೆಮ್ಮದಿಯಾಗಿ ಇರುವೆ ಎಂದಾದರೆ ನಾನು ನಿನ್ನನು ಬಿಡಲು ಸಿದ್ದ"ಎಂದು ಹೇಳಿ ಕಂಬನಿ ಸುರಿಸುತ್ತ ತನ್ನ ಮನಸಲ್ಲಿ ಜ್ವಾಲಾಮುಕಿ ಯಂತೆ ಇದ್ದ ನೋವನ್ನು ಹೊರಹಾಕಿ ಅಲ್ಲಿಂದ ಹೊರಡುತ್ತಾಳೆ.

ಭವಿಷ್ಯ ದೇವರು ಹಾಕಿದ ಲೆಕ್ಕಾಚಾರದ ಮುಂದೆ ಮಾನವನ ಆಟಗಳು ನಡೆಯುದಿಲ್ಲ ಅನಿಸುತ್ತೆ..... ವಿನು ಮನಸನ್ನು ಅರಿಯದೆ ಸೌಮ್ಯ ವಿನೋದ್ ಪ್ರೀತಿಯಿಂದ ದೂರಹೋಗಲು ಬಯಸುತಾಳೆ


ಕೊನೆಗೂ ನನ್ನ ಕಥಾ ನಾಯಕ ಯಾರಿಗೂ ಅರ್ಥವಾಗದ ಒಂದು ಕಲ್ಲಾಗಿ ನಿಲ್ಲುತಾನೆ.
ವಿದಿಯ ಮುಂದೆ ಯಾರು ನಿಲ್ಲಲು ಸಾಧ್ಯವಿಲ್ಲ ಅವನು ಆಡಿಸಿದಂತೆ ನಾವು ಅಡಬೇಕು
ಅದರಲ್ಲೂ ಪ್ರೀತಿ ವಿಷಯದಲ್ಲಿ ಅವನ ಪಾತ್ರ ಅಪಾರವಾದದ್ದು. 

ನನ್ನ ಕಥಾ ನಾಯಕನ ಮನಸನ್ನ ಯಾರು ಅರಿಯಲು ಪ್ರಯತ್ನವೇ ಪಡಲಿಲ್ಲ ಹೌದು ಗೆಳೆಯರೇ ವಿನೋದ್ ಸೌಮ್ಯ ಳನ್ನು ತನ್ನ ಪ್ರಾಣ ಎಂದುಕೊಂಡಿದ್ದ... 
ಅವಳ ಪ್ರೀತಿ ಒಂದಿದ್ದರೆ ನನಗೆ ಬೇರೆ ಏನು ಬೇಡ.. 
ಅವಳೇ ನನಗೆ ಸ್ನೇಹಿತೆ... 
ಅವಳ ಮಡಿಲಲಿ ನಾನು ಮಗುವಂತೆ ಇರಬೇಕು ಎಂದು ಕನಸು ಗಳನ್ನೂ ಕಂಡಿದ್ದ ವಿನು ಯಾಕೆ ಸೌಮ್ಯಳನ್ನ ದೂರ ಮಾಡಿದ್ದು ಗೊತ್ತಾ?

ಕನಸುಗಳನ್ನೇ ಜೀವನ ಎಂದು ತಿಳಿದು .... 
ಕನಸಿನಂತೆ ಸೌಮ್ಯ ಎಂದು ತಿಳಿದು ಸೌಮ್ಯಳನ್ನ ದೂರ ಮಾಡಿದನ ??
ಅಥವಾ ಸೌಮ್ಯ ಳ ಪ್ರೀತಿಯ ಭಾರವನ್ನು ಹೊರಲಾರದೆ ದೂರ ಮಾಡಿದನ ??? 
ಎಲ್ಲರ ಹಾಗೆ ವಿನೋದ್ ಪ್ರೀತಿ ಕೂಡ ಟೈಮ್ ಪಾಸ್ ????
ಸೌಮ್ಯ ಳ ಗೆಳೆತನ ವಿನೋದ್ ಪ್ರೀತಿ ಮನಸನ್ನ ಕೊಂದಿತ್ತ ??

ಇದಕ್ಕೆಲ ಸಿಕ್ಕ ಉತ್ತರ ಒಂದೇ ಗೆಳೆಯರೇ .....ಜೀವನ ಹೀಗೆ ಅಲ್ಲವೇ ನಾವು ಏನು ಆಗುವುದಿಲ್ಲವೋ ಎಂದು ಭಾವಿಸುತ್ತೇವೋ ಅಂಥಹ ಘಟನೆ ಗಳೇ ಸಂಬವಿಸುತ್ತದೆ......

ಹೌದು ಗೆಳೆಯರೇ ಆ ದೇವರ ಆಟ ಬಲ್ಲವರು ಯಾರು ??
ನನ್ನ ಕಥಾ ನಾಯಕನಿಗೆ ಮಾರಣಾಂತಿಕ ಕಾಯಿಲೆ (brain cancer ) ಕಾಡುತ್ತಿರುತ್ತದೆ.
ವಿನೋದ್ ಅಸೆ ಪಟ್ಟಂತೆ ಅವನಿಗೆ ಪವಿತ್ರ ಪ್ರೀತಿ ಕೊಟ್ಟಿದ ಆ ದೇವರು ಜೊತೆಗೆ ಆ ಕಾಯಿಲೆ ಯನ್ನು ಕೊಟ್ಟರುತ್ತಾನೆ.ಇದರಲ್ಲಿ ಯಾರದು ತಪ್ಪು ತಿಳಿಯುತ್ತಿಲ್ಲ ಪ್ರೀತಿ ಕೊಟ್ಟಿ ಜೊತೆಗೆ ಕಾಯಿಲೇನು ಕೊಟ್ಟ ಆ ದೇವರು ನಿಜವಾಗಿಯೂ ಕ್ರೂರಿ
ಇದು ವಿನೋದ್ ಸೌಮ್ಯ ಳಿಗೆ ಮಾಡಿದ ಮೋಸವೇ ??
ಅಥವಾ ಆ ದೇವರು ವಿನೋದ್ ಗೆ ಮಾಡಿದ ಮೋಸವೇ ?
ಅಥವಾ ಇವರ ಇಬ್ಬರ ಪ್ರೀತಿ ಕಂಡ ಆ ದೇವರಿಗೆ ಅಸುಯೆಯಾಯಿತೆ ?


ಕೊನೆಗೂ ಆ ದೇವರ ಆಟ ಬಲ್ಲವರು ಯಾರು ಇಲ್ಲ ...
ಅವನ ಮುಂದೆ ಯಾರು ನಿಲ್ಲಲು ಆಗೋಲ....
ಕಲ್ಲಿನ ದೇವರಿಗೆ ಹೃದಯವೇ ಇಲ್ಲ ಅನಿಸುತ್ತೆ ...
ಎಷ್ಟೇ ಆದರೂ ಕಲ್ಲು ಅಲ್ಲವೇ ಅವನಿಗೆಲ್ಲಿ ತಿಳಿಯಬೇಕು ಪ್ರೀತಿಯ ಬೆಲೆ ಹೇಳಿ?

ಇಂದಿಗೂ ನನ್ನ ಕಥಾ ನಾಯಕ ಸೌಮ್ಯ ಜೊತೆ ಕಳೆದ ಸವಿ ನೆನಪು ಗಳನ್ನೂ ನೆನೆಯುತ್ತ ಜೀವನ ಸಾಗಿಸುತ್ತ ಇದ್ದಾನೆ ಇಲ್ಲಿಯವರೆಗೂ ಈ ಕಹಿ ಸತ್ಯ ಸೌಮ್ಯ ಳ ಗಮನಕ್ಕೆ ಬಂದಿಲ್ಲ... 
ಭವಿಷ್ಯ ಬಂದರೆ ನಾನು ಈ ಕಥೆಯನ್ನು ಮುಂದುವರೆಸಬಹುದೆ ?

ಕಲ್ಲಿನ ದೇವರಿಗೆ ಒಂದು ಪ್ರಾರ್ಥನೆ 

ಪ್ರೀತಿ ಎಲ್ಲರಿಗೂ ಕೊಡು ಕೊಟ್ಟ ಮೇಲೆ ದಯವಿಟ್ಟು ಮತ್ತೆ ಆ ಪ್ರೇಮಿ ಗಳ ಜೀವನದಲ್ಲಿ ನೀನು ಹೋಗಬೇಡ
ಅವರನ್ನು ಬಾಳಲು ಬಿಡು
ಪ್ರೀತಿ ಗೆ ಸಾವು ಕೊಟ್ಟಿಲ್ಲ ನೀನು ಆದರೆ ಪ್ರೀತಿ ಮದುವರಿಯಲು ಯಾಕೆ ಈ ಶಿಕ್ಷೆ ??

ಪ್ರೀತಿ ನು ಹೇಳದೆ ಕೊಡುವೆ ಹಾಗೆ ಸಾವನ್ನು ಹೇಳದೆ ಕೊಡುವೆ
ಪ್ರೀತಿಗೂ ಸಾವಿಗೂ ಎಷ್ಟು ನಂಟು ಇಟ್ಟೀದ್ದಿಯ ದೇವರೇ ನೀನು
ನಿನ್ನ ಕಲ್ಲು ಹೃದಯದ ಶಿಕ್ಷೆಯನ್ನು ಸಹಿಸುವ ಶಕ್ತಿ ಆ ಪ್ರೀತಿಗೆ ಕೊಟ್ಟಿದ್ಯ
ಆದರೆ ಸಾವನ್ನು ಗೆಲ್ಲುವ ಶಕ್ತಿ ಪ್ರೀತಿಗೆ ಕೊಟ್ಟಿಲ್ಲ ಯಾಕೆ

10 comments:

 1. hege helli chandu..idannna odho namge ist feel n pain agatte.. adralli ah katha nayakana paadenu.. ??

  ReplyDelete
 2. sadya ke avanige avanige irodu andre frdship mathe avanade ada nenapina loka istu saku alva avanige

  ReplyDelete
 3. nijvaglu gothadru saha avlu thumba novu padthale yakandre avalu devaranthe nodutha avnanannu prithisuthiddalu avalige bega thilidu avana prithi gothagali

  ReplyDelete
 4. Gotu Adare nijvagiyo avalu jeevanta vagi irtala soumya

  ReplyDelete
 5. ಕಥೆ ತುಂಬಾ ಚೆಂದ ಇದೆ ಕಥಾನಾಯಕ ಮಾಡಿರುವುದು ಸರಿ ಇದೆ,ಆದರೆ ಒಂದು ಮಾತು ನಿರ್ಮಲವಾದ ಪ್ರೀತಿ ಒಂದು ದಿನ ಬಾಳಿದರು ಸಾಕು ಜೀವನ ಸಾರ್ಥಕ.
  ಕಾರಣ ಅವರ ಪ್ರೀತಿ ಬಗ್ಗೆ ನೀವೇ ತಿಳಿಸಿದಿರಿ.
  ದಯವಿಟ್ಟು ನಿಮ್ಮ ಕಥಾನಾಯಕನಿಗೆ ಈ ಮಾತುಗಳನ್ನು ತಿಳಿಸಿ
  (ಪ್ರೀತಿಯಲ್ಲಿ ನೊಂದ ಜೀವಿಗಳು ಕೆಲವರು ಮಾತ್ರ ಒಳ್ಳೆ ದಾರಿಯಲ್ಲಿ ಇರುತಾರೆ ಇನ್ನೂ ಕೆಲವರು ಪ್ರಪಂಚವೇ ಹೀಗೆಂದು ಕೆಟ್ಟ ದಾರಿಯಲ್ಲೇ ನಡೆಯುವುದು ಸಹಜ)
  ನನ್ನ ಜೀವನದ ಕಥೆಯು ಹೀಗೆ ಇದೆ ಎಷ್ಟು ಸಲ ಹೇಳಿದರು ನನ್ನ ಬಿಡುವ ಮನಸ್ಸಿಲ್ಲ ನನ್ನ ಪ್ರೀತಿಗೆ, ಅವಳದು ಒಂದೇ ಮಾತು ಕಾಯಿಲೆ ದೇಹಕ್ಕೆ ಮಾತ್ರ ಮನಸ್ಸಿಗಲ್ಲ ನಾನು ಪ್ರಿತಿಸಿರುವುದು ನಿನ್ನ ಮನಸ್ಸನ್ನ ಯೆಂದು ಹೇಳುತಾಳೆ ಹುಚ್ಚು ಹುಡುಗಿ.

  ReplyDelete
 6. ಚಂದು ನಿಮ್ಮ ಕಥೆಯ ಕಥಾ ನಾಯಕನದು ತುಂಬಾ ದೊಡ್ಡ ಮನಸ್ಸು ಅವರು ಮಾಡಿರುವುದು ಸರಿ ಇದೆ, ನಿಜ ಕಥೆಯೆಂದು ಹೇಳಿದಿರಿ ಮನಸ್ಸಿಗೆ ತುಂಬಾ ನೋವಗುತದ್ದೆ ದೇವರು ಅವರಿಗೆ ಇಂಥ ಪರಿಸ್ಥಿತಿ ಕೊಡಬಾರದಿತ್ತು, ಒಳ್ಳೆಯವರೆಗೆ ಪರೀಕ್ಷೆ ಮಾಡೋದು ಅವನು. ಸಾದ್ಯವಾದರೆ ನಿಮ್ಮ ದೋಸ್ತ್ ನ ಪರಿಚಯ ಮಾಡಿಕೊಡಿ.

  ReplyDelete