Tuesday 4 October 2011

ಸ್ನೇಹಾನ ಪ್ರೀತಿನ


ಹುಡುಗರ ಲೈಫ್  ಇಷ್ಟೇ  ಹುಡುಗಿಯರ ಲೈಫ್ ಈಗೇನೆ...!!!!  


ಹಾಯ್ ಗೆಳೆಯರೇ :
ಇದು ನನ್ನ ಮೊದಲ ಪ್ರಯತ್ನ 
೯೫ %  ಸತ್ಯ ೫ %  ಕಥೆ
ಭಾವನೆ ಗಳಿಗೆ ಬೆಲೆಯೇ ಇಲ್ಲದ ನಮ್ಮ  ಕಾಂಕ್ರೆಟ್ ಕಾಡಿನಲ್ಲಿ  ಭಾವನೆಗಳನ್ನ ಸ್ಪಂದಿಸುವ ಬಾಳ ಸಂಗತಿ ಯನ್ನು ಹುಡುಕುತ್ತಾ  ಹೊರಟ ಒಬ್ಬ ಕುರುಡನ ಜೀವನದಲ್ಲಿ ನಡೆದ   ನೈಜ ಗಟನೆ 
ಯನ್ನು ಆದರಿಸಿ ಬರೆದ ಒಂದು ಕತೆಯ ಜೊತೆಗೆ ವ್ಯಥೆ...!!! 

ಇವನ ಹೆಸರು ಆಕಾಶ್ ಹುಟ್ಟಿದ್ದು ಹಳ್ಳಿ ಯಲ್ಲಿ, ಬೆಳೆದಿದ್ದು ಓದಿದ್ದು ನಮ್ಮ ಕಾಂಕ್ರೆಟ್ ಕಾಡಿನಲ್ಲಿ., 
ಚಿಕ್ಕ ವಯ್ಯಸಿನಿಂದ ಒಂಟಿಯಾಗೆ ಬೆಳೆದ ಆಕಾಶ್  ಯಾವಾಗಲು ಒಂಟಿ ಯಾಗೆ ಇರಲು ಇಷ್ಟ ಪಡುವ ಗುಣದವನು. ವಿಧ್ಯಾಭ್ಯಾಸ ಮುಗಿಸಿ  ಜೀವನ ಸಾಗಿಸಲು  ಕೆಲಸಕ್ಕೆ ಸೇರಿ, ನನಗೆ  ಜೀವನದಲ್ಲಿ ಇಸ್ಟೇ ಸಾಕು ಬೇರೆ ಏನು ಬೇಡ ಎಂದು ನಿಟ್ಟು ಉಸಿರು ಬಿಡುತ್ತಿರುವಾಗಲೇ...!!!  ಆಕಾಶ್ ಜೀವದಲ್ಲಿ  ಒಂದು ತಂಗಾಳಿ ಯಾಗಿ ಬಂದವಳು  ಉಮಾ....!!! ಕೊನೆಗೆ ಅವಳು ಆಕಾಶ್ ಜೀವನದ ಬಿರುಗಾಳಿ ಕೂಡ ಆಗುತ್ತಾಳೆ...!!! 
 
ಒಮ್ಮೆ ಗೊದೂಳಿ ಸಮಯದಲ್ಲಿ  ಕೆಲಸ ಮುಗಿಸಿ ಮನೆಗೆ ಹೊರಡುವಾಗ  ಅವನ ಸಂಚಾರಿ ದೂರವಾಣಿಗೆ (cell phone )  ಒಂದು ಗೊತಿಲ್ಲದ  ಸಂಕೆ ಇಂದ ಒಂದು ಸಂದೇಶ ಬರುತೆ.  (Msg from unknown number).
 
ಹಿಂದಿನ ಕಾಲದಲ್ಲಿ  ನದಿ ಮೂಲ, ವ್ರುಷಿ ಮೂಲ, ಹೆಣ್ಣಿನ ಮೂಲ, ಹುಡುಕ ಬಾರದು ಎಂದು ನಮ್ಮ ಹಿರಿಯರು ಹೇಳಿದ ಮಾತು ನೆನಪಿಗೆ ಬರುತ್ತೆ., ಅದೇ ರೀತಿ ಈಗಿನ ಕಾಲದಲ್ಲಿ ಗೊತ್ತಿಲ್ಲದೇ ಬಂದ ಸಂದೇಶ ಮೂಲ, ಹಾಗು ಗೊತಿಲ್ಲದೆ ಪರಿಚಯ ವದ ಹುಡುಗಿಯ ಮೂಲ ಹುಡುಕ ಬಾರದು ಅನಿಸುತ್ತೆ.
 
ಬಹುಷಃ ಆಕಾಶ್   ಸಂದೇಶ ಮೂಲ ಹುಡುಕ ದೇ ಇದ್ದಿದ್ದರೆ ಇಂದು ನಾನು ಇಂದು ಈ ಕಥೆ ಬರೆಯಲು ಪ್ರೇರಣೆನೇ ಇರ್ತಾ ಇರಲಿಲ್ಲ ಅನಿಸ್ಸುತ್ತೆ ಗೆಳೆಯರೇ...!!!  
ಸಂದೇಶ ಮೂಲ ಹುಡುಕುತ ಹೊರಟ ಆಕಾಶ್  ಒಮ್ಮೆ ಆ ನಂಬರ್ ಗೆ  ಕರೆ ಮಾಡಿದ, ಅವನು ಮಾತನಾಡಿದ ಶೈಲಿಯನ್ನು ಕಾಲ್ಪನಿಕವಾಗಿ ಹೇಳುತ ಇದೇನೇ ಗೆಳೆಯರೇ...!!!!
ಆಕಾಶ್  :    ಹಲೋ ಯಾರು ಇದು..??   

unknw :    ನಾನು ಉಮಾ ನೀವು ಯಾರು..?? ಯಾಕೆ ಕರೆ ಮಾಡಿದ್ದೂ..??  ನನ್ನ ನಂಬರ್ ಯಾರು ಕೊಟ್ಟಿದ್ದು..?? 

ಆಕಾಶ್   :    ನಾನು ಆಕಾಶ್. ನಿಮ್ಮ ನಂಬರ್ ನಿಂದ ನನಗೆ ಸಂದೇಶ ಬಂದ ಕಾರಣ ನಾನು ಕರೆ ಮಾಡಿದ್ದು.. 

ಉಮಾ  :    ಒಹ್  ಕ್ಷಮಿಸಿ ನನ್ನ ಗೆಳತಿಗೆ ಕಳಿಸಬೇಕಾದ ಸಂದೇಶ ತಪ್ಪಾಗಿ ನಮಗೆ ಬಂದಿದೆ  ಕ್ಷಮಿಸಿ,  ಎಂದು ಉಮಾ ಫೋನ್ ಇಡುತ್ತಾಳೆ. 
ಸಾಮಾನ್ಯ ವಾಗಿ   ನಮಗೆ unknw  ನಂಬರ್ ನಿಂದ ಸಂದೇಶ ಬಂದರೆ ನಾವು ಹೀಗೆ  ಹೇಳುವುದು..!!  ಹಾಗೆ ಆಕಾಶ್ ಕೂಡ ಸುಮ್ಮನೆ ಕರೆ ಕಟ್ ಮಾಡಿ, ಅವನ ಕೆಲಸದಲ್ಲಿ ತೊಡಗು ತಾನೆ. 

ಮುಂದಿನ ದಿನ   ಉಮಾ ನಂಬರ್ ನಿಂದ ಮತ್ತೆ ಸಂದೇಶ ಬರುತ್ತೆ  ಹೀಗೆ, ಸಂದೇಶಗಳ ಮೂಲಕ  ಪರಿಚಯವಾದ ಇವರು ಒಳ್ಳೆ ಸ್ನೇಹಿತರಾಗುತ್ತಾರೆ, ಒಂದು  ದಿನ   ಆಕಾಶ್ ಗೆ  ಹುಶಾರು ಇಲ್ಲದ ಸಮದಲ್ಲಿ ಕೆಲಸಕ್ಕೆ ರಜೆ ಹಾಕಿ ಮನೆಯಲ್ಲೇ ಇರುತ್ತಾನೆ ಆಗ ಉಮಾ ಜೊತೆ ಮಾತಾಡಿದ ಕೆಲವು ವಾಕ್ಯಗಳು ಹೀಗೆ...!!!! 

ಉಮಾ : ಹಾಯ್ ಆಕಾಶ್  ಏನು ಮಾಡ್ತಾ ಇದ್ದೀರಾ..??  

ಆಕಾಶ್ :  ಮಲ್ಗಿದಿನಿ ಉಮಾ.  

ಉಮಾ :  ಯಾಕೆ ಏನು ಆಯಿತು ಆಕಾಶ್..??!! 

ಆಕಾಶ್ :   ಜ್ವರ ಬಂದಿದೆ. 

ಉಮಾ :  ಅವನು ಯಾಕೆ ಬಂದ ಆಕಾಶ್ ಮೇಲೆ ಹ..??? 

ಆಕಾಶ್ :  ಅಹ ಅಹ ಆ ಅವನು ನಿನ್ನ ಗೆಳೆಯ ಅಲ್ವ  ಅದಕೆ..!!  

ಉಮಾ : ಸಾಕು ಸುಮ್ನೇ ಇರೋ.   

ಆಕಾಶ್ :
ಆಯಿತು ಉಮಾವತಿ ಸುಮ್ಣನೆ ಇರ್ತೀನಿ.  

ಉಮಾ :
ಬೇಡ ಮಾತಾಡು ನನ್ನ ಜೊತೆ.  

ಆಕಾಶ್ : ಭಗವಂತ ಒಳ್ಳೆ ಲೂಸ್ ಹುಡುಗಿ ಸಹವಾಸ. 

ಉಮಾ : ಯಾಕೋ ಕೋತಿ ರಾಮ  ನನ್ನಂತ ಫ್ರೆಂಡ್ ಸಿಗೋಕೆ ನೀನು ಪುಣ್ಯ ಮಾಡಿರಬೇಕು..!! 

ಆಕಾಶ್ : ಹೌದು ಇದ್ದರು ಇರಬಹುದು, ನೀನು ಸಿಕ್ಕಿದ ಮೇಲೆ  ನನಗೆ ಗೆಳೆತನದ ಭಾವನೆ ತಿಳಿದಿದ್ದು..!!  

ಉಮಾ : ಲೋ ಯಾಕೋ ಬೇಜಾರ್ ಆಗ್ತಾ ಇದೆ ಕಣೋ. ನಿನಗೆ ಬೇಜಾರ್ ಆಗ್ತಾ ಇಲ್ವಾ. 

ಆಕಾಶ್ : ನನಗೆ ಇಲ್ಲ ಪ ನನ್ನ ಅತ್ರ ಮಾತು ಆಡೋಕೆ  ನನ್ನ್ನ ಗರ್ಲ್ ಫ್ರೆಂಡ್ ಇದಾಳೆ ಗೊತ್ತ. 

ಉಮಾ : ಹೇಯ್ ಯಾರೋ ಅದು..?? ಹೇಳಲೇ ಇಲ್ಲ ನನಗೆ..!!

ಆಕಾಶ್ : ಹುಂ  ಉಮಾ ನಾನು  ನನ್ನ ಗರ್ಲ್  ನ  ತುಂಬಾ ಪ್ರೀತಿ ಮಾಡ್ತೀನಿ.   ನನಗೆ ಅವಳು ಅವಳಿಗೆ ನಾನು
ನಮ್ಮದೇ ಅದ ಒಂದು ಪುಟ್ಟ ಲೋಕ. ನನಗೆ ಬೇಜಾರ್ ಅದಾಗ  ಅವಳ ಮಡಿಲಲಿ ಮಲ್ಕೋ ಬೇಕು, ಅವಳನ್ನ ರಾಣಿ ತರ ನೋಡಿಕೋಬೇಕು ಅನ್ನೋ ಆಸೆ ಆದರೆ ಅವಳು ಯಲ್ಲಿ ಇದ್ದಾಳೆ ಅನ್ನೋದೇ ಗೊತ್ತಿಲ್ಲ ವಲ್ಲ. 


ಉಮಾ : ಸಿಗ್ತ್ಳಲೇ ಕಣೋ  ಆಕಾಶ್ ನಿನ್ನ ಮದುವೆ ಅಗೋ  ಗರ್ಲ್ ತುಂಬಾ ಅದ್ರುಸ್ಟ ಮಾಡಿರ ಬೇಕು ಕಣೋ..!! 

ಆಕಾಶ್ :   ನೋಡೋಣ ಉಮಾ.
ಹೀಗೆ  ಆಕಾಶ್ ಉಮಾ ಸಂದೇಶದ ಮೂಲಕ ಇಬ್ಬರು ಭಾವನೆ ಗಳ ಅನ್ಚಿಕೊಳುತ್ತ  ಕೆಲವು ತಿಂಗಳು ಗಳು ಕಳೆದವು. 
ಒಂದು ದಿನ ಮತ್ತೆ ಉಮಾ ಜೊತೆಗೆ ಸಂದೇಶ ಸಂಭಾಶಣೆ ಶುರು ಮಾಡುತ್ತಾನೆ ಅದು ಹೀಗೆ..!! 

ಆಕಾಶ್  :  ಹಾಯ್  ಉಮಾ. 

ಉಮಾ : ಹೇಳು ಆಕಾಶ್. 

ಆಕಾಶ್ : ಯಾಕೋ ಉಮಾ ಬೇಜಾರ್ ಅಲ್ಲಿ ಇದ್ದೀಯ..?? 

ಉಮಾ : ಹಾಗೇನು ಇಲ್ಲ ಕಣೋ. 

ಆಕಾಶ್ :  ನನ್ನ ಮನಸು ಹೇಳ್ತಾ ಇದೆ ನೀನು ಬೇಜಾರ್ ಅಲ್ಲಿ ಇದ್ದೀಯ ಅಂತ. 

ಉಮಾ :  ಹೌದು ಕಣೋ ಸ್ವಲ್ಪ ಬೇಜಾರ್.  

ಆಕಾಶ್ :  ಯಾಕೋ ಉಮಾ ಏನು ಆಯಿತು..?? 
ಉಮಾ ಉತ್ತರಿಸದೆ ಸುಮ್ಮನೆ ಅದಲು. 

ಆಕಾಶ್ : ಸರಿ ಉಮಾ ನಾನು ಕೇಳಿದ್ದರಿಂದ ಬೇಜಾರ್ ಆಗಿದ್ರೆ ಕ್ಷಮಿಸು ಉಮಾ. 

ಉಮಾ : ಅಗೇನ್ ಇಲ್ಲ ಕಣೋ ಆಕಾಶ್.

ಉಮಾ ತಂದೆಯ ಪ್ರೀತಿ ಸಿಗದೇ ಬೆಳೆದ ಹುಡುಗಿ. ತಾಯಿಯ ಮಡಿಲಲಿ ತಾಯಿಯ ಪಾಠವನ್ನು ಕೇಳುತ ಬೆಳೆದ ಪುಟ್ಟ ಹೃದಯದಯ ಪುಟ್ಟ ಹುಡುಗಿ ಉಮಾ. ಚಿಕ್ಕ ವಯಸ್ಸಿಂದ  ನೋವು ಎಂಬ ಬೆಂಕಿ ಯನ್ನು ಸದಾ ಮನಸಲ್ಲಿ ಇಟ್ಟುಕೊಂಡು ಯಾರ ಬಳಿಯೂ  ಹೇಳದೆ  ಅವಳು ಒಬ್ಬಳೇ ಅನುಭವಿಸುತ್ತಾ ಇದ್ದಳು.  ಒಂದು ಮಾತಿನಲ್ಲಿ ಹೇಳ ಬೇಕು ಎಂದರೆ ಬೆಂಕಿಯಲಿ ಅರಳಿದ ಹೂ ಹಾಗೆ ಇವಳು.
ಉಮಾ ತನ್ನ ಯಲ್ಲ  ನೋವನ್ನು ಆಕಾಶ್ ಬಳಿ ಬೀಚಿ ಇಟ್ಟಳು. 
ಆಕಾಶ್  ಉಮಾಳ  ನೋವನ್ನು  ಕೇಳಿ ಅವಳ ಭಾವನೆ ಗಳಿಗೆ ಅಂದಿನಿಂದ ಸ್ಪಂದಿಸತೊಡಗಿದ.

    
ಹೀಗೆ ಕೆಲವು ವರ್ಷಗಳು ಕಳೆದವು ಒಬ್ಬರಿಗೆ ಒಬ್ಬರು ಭಾವನೆ ಗಳನ್ನೂ ಅನ್ಚಿಕೊಳುತ್ತ  ಇವನಿಗೆ ಅವಳು ಅವಳಿಗೆ ಇವನು ಎನ್ನುತ ಅವರ ಸ್ನೇಹ ಪ್ರೀತಿ ಯಾಗಿ ಅರಳಿತು

ಆಕಾಶ್ ಉಮಾ ನ ತನಗೆ ಗೊತಿಲ್ಲದೆ ಪ್ರೀತಿಸಲು ಆರಂಬಿಸಿದ 
ಉಮಾ ಕೂಡ ಅವಳಿಗೆ ಗೊತಿಲ್ಲದೆ ಅಗೆ ತನ್ನ ಮನಸಲ್ಲಿ ಗುಡಿ ಕಟ್ಟಿ ಪೂಗಿಸುತ್ತ ಇದ್ದಳು
 ಇಬ್ಬರು ತಮ್ಮ ಪ್ರೀತಿ ಯನ್ನು ಹೇಳಲಾರದೆ, ಪರಿತಪಿಸಿದರು. 

ಒಂದು ದಿನ  ಆಕಾಶ್ ದೈರ್ಯ ಮಾಡಿ ಇಂದು ಉಮಾ ಗೆ ನನ್ನ ಪ್ರೀತಿ ಯಾ ಬಗ್ಗೆ ಹೇಳಲೇ ಬೇಕು ಎಂದು ನಿರ್ದರಿಸಿದ. 
ಬೆಳಕ್ಕೆ ಬೇಗ ಎದ್ದು  ದೇವಸ್ತಾನಕ್ಕೆ ಹೋಗಿ ನಂತರ ಉಮಳಿಗೆ ಸಂದೇಶದ ಮೂಲಕ, ಹೀಗೆ ಹೇಳಿದ.

ಆಕಾಶ : ಹಾಯ್ ಉಮಾ ಏನು ಮಾಡ್ತಾ ಇದ್ದೀಯ..?? 

ಉಮಾ : ಆಫೀಸ್ ನಲ್ಲಿ ಕೆಲಸ ಕಣೋ ನೀನು ಏನು ಮಾಡ್ತಾ ಇದ್ದೀಯ..?? 

ಆಕಾಶ್ : ನಾನು ಆಫೀಸ್ ನಲ್ಲೆ ಇದೀನಿ ಕಣೋ. 

ಉಮಾ : ತಿಫ್ಫೇನ್ ಆಯ್ತಾ  ಕೊತಿರಾಮ..??

ಆಕಾಶ್ : ಹುಂ ಆಯಿತು ಕಣೋ ನಿಂದು ಆಯ್ತಾ..??  ಉಮಾ ನಾನು ನಿನ್ ಅತ್ರ ಮಾತಾಡ್ ಬೇಕು ಕಣೋ. ಉಮಾ : ಮಾತಾಡು ಆಕಾಶ್ 

ಆಕಾಶ್ :ನೀನು ಇಷ್ಟು ದಿನ ಕೇಳದ ಇದ್ದಲ ನಿನ್ನ ಗರ್ಲ್ ಯಾರೋ ಅಂತ ಹೇಳಲಾ ಯಾರು ಅಂತ..!!

ಉಮಾ : ಹೇಳೋ ಯಾರು ಅಂತ..!!  

ಆಕಾಶ್ :  ಅದು ಬೇರೆ ಯಾರು ಇಲ್ಲ ಕಣೋ ನೀನೆ ಅದು  ನನ್ನ ಜೀವನದ ದಾರಿ ದೀಪ ಆಗಿ ನನ್ನ ಬಾಳ ಸಂಗತಿ ಯಾಗಿ  ನನ್ನ ಉಸಿರು ಇರೋ ವರ್ಗು ನನ್ನ ಜೊತೆ ಇರ್ತ್ಯ..?? 

ಉಮಾ : ಉಮಳಿಗೆ  ಮಾತು ಬರದೆ  ಸಂತೋಷ ದಿಂದ   ಆಕಾಶ್  ಕಂಡಿತ ನಿನ್ನ ಜೊತೆಗೆ  ಇರ್ತೀನಿ ಕಣೋ. 

ಆಕಾಶ್ :  ಇ ಜಗತಲ್ಲಿ ಯಾರು ನಿನ್ನ ನನ್ನ ಅಸ್ಟು ಪ್ರೀತಿಸೋಲ್ಲ ಕಣೋ
.
ಉಮಾ : ಅದು ನನಗೆ ಗೋತು ಕಣೋ ಕೋತಿ ರಾಮ. 

 ಹೀಗೆ  ಆಕಾಶ್ ಉಮಾಳ ಪ್ರೀತಿ  ಮೊಗ್ಗಿನಿಂದ  ಅರಳಿ ಹೂ ಆಯಿತು  ಒಮ್ಮೆ   ಆಕಾಶ್  ಉಮಾ ಮೊದಲ ಬಾರಿಗೆ ಬೇಟಿ ಆಗಲು ನಿರ್ದಾರ ಮಾಡಿದರು  ಅಗೆ ಒಮ್ಮೆ ನಮ್ಮ  ಕಾಂಕ್ರೆಟ್ ಕಾಡಿನ ಹೃದಯ ಬಾಗದಲ್ಲಿ ಇರುವ  ಉದ್ಯಾನವನ  ದಲ್ಲಿ  ಮೊದಲ ಬಾರಿಗೆ ಬೇಟಿ ಮಾಡಿದರು.
ಆಕಾಶ್  ನನ್ನ ಜೀವದ ಗೆಳತಿ ನೋಡೋಲು ಆತುರ ದಿಂದ ಬಂದು  ಉಮಾಳನ್ನು  ಹುಡುಗಿ ಯಂತೆ ನಾಚಿಕೆ ನಗುತ ನೋಡಿ  ಮುಗುಳು ನಗೆ ಬಿರಿದನನು.

ಉಮಾ ಕೂಡ ಆಕಾಶ್ ಅನ್ನು ನೋಡಿ  ನಾಚಿಕೆ ಇಂದ ನೀರಾಗಿ  ಮುಗುಳು ನಗೆ ಬಿರಿದಳು  ನಿಜವಾಗಿಯೂ 
ಹ ದಿನ ಇಬ್ಬರಿಗೂ ಮರೆಯ ಲಾಗದ ದಿನ ವಾಯಿತು. 

ಉಮಾ : ಹೇಯ್ ಕೋತಿ ರಾಮ ಯಾಕೋ ಲೇಟ್ ಹ..?? 

ಆಕಾಶ್ :  ಟ್ರಾಫಿಕ್  ಇತ್ತು ಕಣೋ.
 
ಉಮಾ : ಹೋಗಲಿ ಬಿಡು ಹೇಗಿದ್ದೀಯ.? 

ಆಕಾಶ್  : ಚಂದ ಇದೀನಿ ನೀನು. 

ಉಮಾ : ನಾನು ಚನಗೆ ಇದೀನಿ ಕಣೋ. 

ಆಕಾಶ್ :  ಏನೇ ಮೊದಲೇ ಬಾರಿಗೆ  ಹುಡುಗನ ನೋಡೋಕೆ ಬರ್ತಾ ಇದ್ದೀಯ ಏನು ಆದರು ತರಬೇಕು ಅನಿಸಿಲ್ವ ನಿನಗೆ ಹ..?? 

ಉಮಾ :  ನಾನು ನಿನ್ನ ತಾರಾ ಜುಗ್ಗ  ಅಲ್ಲ ಎಂದು ಹೇಳಿ ತನ್ನ ಬ್ಯಾಗ್ ನಲ್ಲಿ ಪ್ರೀತಿ ಇಂದ ತಂದ ಇದ್ದ  ಸ್ವೀಟ್ ದುದ್ ಪೇಡ  ನ ಕೊಟ್ಟಳು
ನಿಜ ಹೇಳ ಬೇಕು ಎಂದರೆ ಉಮಾಳ ಪ್ರೀತಿ ಎಷ್ಟು ಅಂದರೆ ಅವಳ ಪ್ರೀತಿ ಜಾಸ್ತಿ ಆಗಿ ಪೇಡ ಗೆ ಇರುವೆ ಬಂದಿತ್ತು. 

ಆಕಾಶ್  ಉಮಾ ಇಬ್ಬರು ಪೇಡ ತಿಂದು  ಕುಳಿತರು  ಸ್ವಲ್ಪ ಸಮಯದ ನಂತರ  ಇಬ್ಬರು ಹೊರಡಲು ಸಿದ್ದರಾಗಿ  ಒಬ್ಬರನ್ನು ಒಬ್ಬರು ನೋಡಿ  ಶೇಕ್  ಹ್ಯಾಂಡ್ ಕೊಟ್ಟಿ. ಉಮಾ ಬರುವೆಯ ಎಂದಳು  ನಿಜವಾಗಿಯೂ ಉಮಾಳ  ಹ ಮೊದಲ ನೋಟ  ವನ್ನು ಮರೆಯಲು ಸದ್ಯ ಇಲ್ಲ. 
 
ಹೀಗೆ ಇಬ್ಬರು  ಸಮಯ ಸಿಕ್ಕಾಗೆಲ   ಭೇಟಿ ಮಾಡುತಿದ್ದರು  ಇಬ್ಬರು ಒಬ್ಬರನ್ನು ಒಬ್ಬರು ಬಿಟ್ಟು  ಇರಲಾರದ ದಷ್ಟು ಪ್ರೀತಿಸಿದರು.  ಉಮಾ  ಒಮ್ಮೆ  ನೀನು ನನ್ನ ಪ್ರಾಣ ಎನ್ನುತ ಇದ್ದಳು  ಇವಳಿಗೆ ಅವನು ಅವನಿಗೆ ಇವಳು  ಸುಂದರ ವಾಗಿ ಅರಳಿತು ಇವರ ಪ್ರೀತಿ.

ಒಮ್ಮೆ  ಆಕಾಶ್ ಉಮಾ ಇಬ್ಬರು ಬೇಟಿ ಅದಾಗ  ಗೆಳೆಯರ ಬಗ್ಗೆ ಮಾತನಾಡುತಿರುವಾಗ  ಉಮಾಳ  ಆಪ್ತ ಗೆಳೆಯನಾದ ಅರುಣ್  ಬಗ್ಗೆ ಹೇಳಿದಳು ಆಕಾಶ್ ಅರುಣ್ ನನ್ನ ಆಪ್ತ ಗೆಳೆಯ ನಾನು ಇವನ ಬಳಿ ಕೊನೆಯವರೆಗೂ ನಮ್ಮ ಸ್ನೇಹ ಇಗೆ ಇರುತೆ  ಇದಕ್ಕೆ ನಿನ್ನ ಸಮ್ಮತಿ ಬೇಕು ಎಂದು ಹೇಳಿದಳು. ಆಕಾಶ್  ಮೊದಲೇ ಈ ವಿಷಯ ತಿಳಿದಿದ್ದರಿಂದ  

ನಿನ್ನ ಆಸೆಯೇ ನನ್ನ ಆಸೆ ಎಂದು ತಿಳಿದು, ಹು ಎಂದು  ಹೇಳಿದನು. 
ಹೀಗೆ ಸುಂದರವಾಗಿದ್ದ ಇವರ ಪ್ರೇಮದ ಜೀವನ ನೋಡಿ ಆ ವಿಧಿಗೆ ಹೊಟ್ಟೆ ಕಿಚ್ಚು ಬಂತು ಅನ್ನಿಸುತೆ,  ಒಮ್ಮೆ ಇವರ ಮದ್ಯ ಆ ವಿಧಿ ಬಿರುಗಾಳಿ ಬೀಸಿ ಬಿಟ್ಟಿತು.

ಎಲ್ಲರ ಪ್ರೀತಿ ಯಲ್ಲೂ ಸ್ವಾರ್ತ  ಇದ್ದೆ ಇರುತ್ತೆ, ಸ್ವಾರ್ತ ಇಲ್ಲದೇ ದಿದ್ದರೆ ಪ್ರೀತಿ ಸಿಗದು ಸ್ವಾರ್ತ ಅತಿ ಆದರೆ ಪ್ರೀತಿಯು ಕೈ ತಪ್ಪಿ ಹೋಗುತ್ತೆ, ಅನ್ನೋದಿಕ್ಕೆ ಒಂದು ದಿನ ನಡೆದ ಈ ಗಟನೆಯೇ ಕಾರಣ. 

ಒಮ್ಮೆ  ಆಕಾಶ್  ಉಮಳನ್ನ ಭೇಟಿ ಮಾಡಿ ಅಂದು  ಉಮಳಿಗೆ ಇಷ್ಟವಾದ  ಹೂ ಅನ್ನು ಉಮಳಿಗೆ ಕೊಟ್ಟ. 

ಆಕಾಶ್ : ಉಮಾ ನೀನು ನನ್ನ ನಿಜವಾಗಿಯೂ ಪ್ರೀತಿಸ್ತ ಇದ್ದೀಯ..??

ಉಮಾ : ಉಮಾ ಕಣ್ಣಲಿ ತಟ್ಟನೆ ನಿರು ಬಂದು ಯಾಕೋ ನೀನು ಇ ರೀತಿ ಕೇಳುತ ಇದ್ದೀಯ..?? ಪ್ರೀತಿ ಮಾಡದೇ ನಾನು ನಿನ್ನ ಜೊತೆ ಎಷ್ಟು ವರ್ಷ ಇದೀನ ಹೇಳು ನೀನು ನನ್ನ ಪ್ರಾಣ ಕಣೋ.

ಆಕಾಶ : ಹುಂ ಕಣೋ ಅದು ನನಗೆ ಚನ್ನಗೆ ಗೊತ್ತು ಉಮಾ, ನೀನು ನನಗೆ ಎಂದು  ಆದರೆ ನನಗಾಗಿ ಒಂದು ಮಾತು ನಡೆಸಿ ಕೊಡುವೆಯ..??

ಉಮಾ : ಹುಂ ಆಕಾಶ್ ಏನು ಹೇಳು ನಾನು ಮಾಡ್ತೀನಿ.

ಆಕಾಶ್ : ನಿನಗೆ ನನ್ನ ಪ್ರೀತಿ ಬೇಕು ಎಂದರೆ ನೀನು ನಿನ್ನ ಸ್ನೇಹವನ್ನು ಬಿಡ  ಬೇಕು ಎಂದ.
 
ಉಮಾ : ಆಕಾಶ್ ಇಂದ ಇ ಮಾತು ಅನ್ನು ಕೇಳಿ ಒಂದು ನಿಮಿಷ  ಏನು ಮಾತುಆಡದೇ  ಏನು ಕರಣ ಏನು ಕೇಳಿದಳು..??

ಆಕಾಶ್ :  ಆತುರ ದಿಂದ ಸ್ವಾರ್ತನೆ ಕಾರಣ ಎಂದು ಹೇಳಿದ,  ನೀನು ಬಿಡಲೇ ಬೇಕು ಇಲ್ಲ ನನ್ನನ್ನೇ ಬಿಟ್ಟುಬಿಡು ಎಂದ. 

ಉಮಾ :  ಆಕಾಶ್ ಇಂದ ಇ ಮಾತು ಅನ್ನು ಕೇಳಿ ಉಮಾಳ ಹೃದಯ ಒಮ್ಮೆ ನಿಂತು ಬಿಟ್ಟಿತೇನೋ ಅನಿಸಿ ಬಿಟ್ಟಿತು  ಉಮಳಿಗೆ ಏನು ತೊಚಲರದೆ ಮೌನ ಗೌರಿ ಯಂತ್ ಮೌನ ವಾದಳು.

ಉಮಾ ಆಕಾಶ್ ಯಾಕೆ ಹೀಗೆ ಹೇಳುತಾನೆ ಎಂದು ಯೋಚಿಸದೆ ನನಗೆ ನೀನು ಒಂದು ಕಣ್ಣು, ಸ್ನೇಹ ಒಂದು ಕಣ್ಣು ಹೇಗೆ ಬಿಡಲಿ  ನನಗೆ ಎರುಡು ಕಣ್ಣು ಗಳು ಬೇಕು ಎಂದಳು ಉಮಾ ಯೋಚಿಸದೆ ಕೋಪ ದಿಂದ  ನನಗೆ ಎರುಡು ಕಣ್ಣು ಗಳು ಬೇಕೇ ಬೇಕು ಬಿಡಲು ಸದ್ಯ ಇಲ್ಲ  ನೀನು ಸಂತೋಷ ವಾಗಿ ಇರುವೆ ಎನ್ನುವ ದ್ದಾರೆ  ನನ್ನ ಅನ್ನು ಬಿಟ್ಟುಬಿಡು ಎಂದಳು.

ಉಮಾನೆ ಜೀವನೆ ಎಂದು ಕೊಡ  ಆಕಾಶ್ ಉಮಾ ಳಿಂದ ಬಂದ ಮಾತುಗಳ ಬಾಣ ಗಳು ಆಕಾಶ್ ಹೃದಯವನ್ನು ಚುಚಿದವು. 
ಆಕಾಶ್ ಕೊನೆಗೆ ಕಣ್ಣು ಒದರೆ ಇರಬವುದು ಹೃದಯ ಒದರೆ  ಇರಲಾಗದು ಎಂದು   ನೆಲಕ್ಕೆ ಉರಳಿ ತನ್ನ ಉಸಿರು ಬಿಗಿ ಇಡಿದು ಕಣ್ಣು ಮುಚ್ಧಿದನು. 

ಕೊನೆಯದಾಗಿ ಇಲ್ಲಿ ಯಾರು ಯಾರನ್ನ ಬಿಟ್ಟು ಕೊಟ್ಟರು  ಪ್ರೀತಿ ಗೆ ಸಾವಿಲ್ಲ ಅಂತಾರೆ  ಅವನ ಪ್ರೀತಿಯೇ ಅವನ ಹೃದಯ ವನ್ನು ಹೊಡೆದು ಅಕಿತು ?

ಸ್ನೇಹ ಅಮರ ಅಂತಾರೆ ಆದರೆ ಆಕಾಶ್ ಜೇವನದಲ್ಲಿ  ಸ್ನೇಹ ಅವನ ಮರಣ ಆಯಿತು  ?

ಚಿಕ್ಕವನಿಂದ ಒಂಟಿಯಾಗಿ ಬೆಳೆದ ಆಕಾಶ್ ಗೆ ಸ್ನೇಹ ದ ಬೆಲೆ ಗೊತ್ತಿಲದೇ ಇಗೆ  ಆತುರ ಪಟ್ಟನ  ?

ಅಥವಾ ತಂದೆ ಪ್ರೀತಿ ಸಿಗದೇ ಬೆಳೆದ ಉಮಾ ಪ್ರೀತಿಯ  ಬೆಲೆ ಗೊತ್ತಿಲದೇ ಆತುರ ಪಟ್ಟಳ?

 ಸ್ನೇಹ ಜೀವನದ ಒಂದು ಭಾಗ, ಪೂರ್ತಿ ಜೀವನ ಅಲ್ಲ. ಪ್ರೀತಿ ನು ಸಹ ಜೀವನದ ಒಂದು ಭಾಗನೇ ಪ್ರೀತಿನೆ ಜೀವನ ಅಲ್ಲ.

ಕೊನೆಗೂ ನನಗೆ ತಿಳಿಯುತ್ತಿಲ್ಲ ಇಲ್ಲಿ ಕೊನೆಗೆ ಯಾವುದು ತನ್ನ ಗುರಿಯನ್ನು ಮುಟ್ಟಿತು ಎಂದು ?

 ಸ್ನೇಹಾನ ಪ್ರೀತಿ ನ ಅಂತ

No comments:

Post a Comment